ಪ್ರಿಯ ಓದುಗ ಗೆಳತಿ- ಗೆಳೆಯರೇ,
ಬ್ಲಾಗ್ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಒಳಗೆ ದುರಸ್ತಿ ಕಾರ್ಯ ನಡೆಯುತ್ತಿದೆ,ನನ್ನೊಳಗೂ..
ರಿಪೇರಿ ಕೆಲಸ ಸಾವಧಾನವಾಗಿ ನಡೆಯುತ್ತಿದೆ, ಸ್ವಲ್ಪ ಸಮಯದಲ್ಲೇ ಮತ್ತೆ ತೆರೆದುಕೊಳ್ಳಬಹುದು..
ಅಲ್ಲಿಯ ತನಕ ಶಾಂತಂ ಪಾಪಂ..!
ಇಷ್ಟಕ್ಕೂ ನನ್ನ ಬ್ಲಾಗು ಮುಚ್ಚಿಯೇ ಇದ್ದರೆ ಅದರಿಂದ ಯಾರಿಗೂ ನಷ್ಟವಾಗುವುದಿಲ್ಲ, ಇದೇನೂ ಅನಿವಾರ್ಯವೂ ಅಲ್ಲ..ಹಾಗಂತ ನಾನು ತಿಳಿದುಕೊಂಡಿದ್ದೇನೆ
ಇಂತಿ ನಿಮ್ಮ
ಗೆಳೆಯ
14 comments:
enagide nimage? nivalladiddare innu yaru bareyodu?
SAHITYA KR
ದೇವರು ಒಳ್ಳೆಯದು ಮಾಡಲಿ. ನಿಮ್ಮೊಳಗೆ ಕೆಲಸ ಚೆನ್ನಾಗಿ ನಡೆದ ಮೇಲೆ ಮತ್ತೆ ಸಂಪೂರ್ಣ ಸಿದ್ದರಾಗಿ ಬನ್ನಿ.
ಬ್ಲಾಗ್ ಲೋಕದಲ್ಲೆಲ್ರಿಗೂ "follow the suit" ಅನ್ನೋ ರೋಗ ಹಿಡಿದಿದೆ.. ಒಬ್ಬರಾದ ಮೇಲೊಬ್ಬರು ಬ್ಲಾಗ ಬಾಗಿಲು ಮುಚ್ಚುತ್ತಿದ್ದಾರೆ. :(
ಒಳ್ಳೆಯ ಕೆಲಸ ಮಾಡಿದ್ದೀರಿ. ಈ ಬ್ಲಾಗು ಲೋಕ ನರಕ ಆಗಿಬಿಟ್ಟಿದೆ. ಹೆಚ್ಚಿನವರು ವಿಷ ಸರ್ಪಗಳ ಹಾಗೆ ಎರಗುತ್ತಿದ್ದಾರೆ. ಕಚ್ಚಾಟ, ಜಾತೀಯತೆ ಬಂದು ಅದೊಂದು ಹೇಸಿಗೆ ಜಾಗ ಆಗಿದೆ. ಸುದ್ದಿ ಮಾತು ನೋಡಿ, ಕೆಂಡಸಂಪಿಗೆ ನೋಡಿ, ಬರಿ ಜಾತಿ ಜಗಳ. ಅವಧಿಯೊಂದೇ ಸದ್ಯಕ್ಕೆ ಚೆನ್ನಾಗಿರೋದು.
ನಿಮ್ಮಂಥ ಹಿರಿಯ ಲೇಖಕರು ಅದರಲ್ಲಿ ಕಾಲಿಡಬಾರದು. ನಿಮ್ಮ ಮಾಧ್ಯಮವೇ ಬೇರೆ. ದಾರಿಯೇ ಬೇರೆ. ಒಳ್ಳೆಯದಾಗಲಿ, ಮತ್ತೊಂದು ಸಂಕಲನ ತನ್ನಿ. ಹೊಸ ಹೊಸ ಕತೆ ಬರೆಯಿರಿ. ಓದುತ್ತೇವೆ.
-ಶ್ರೀನಿವಾಸ ಶರ್ಮ
ಎಂತ ಆಯ್ದು?ಬ್ಲೋಗ್ ಲೋಕಕ್ಕೆ ಗರ ಬಡುದ್ದಾ?ಘಟಾನುಘಟಿಗ ಒಬ್ಬೊಬ್ಬರಾಗಿ ಬಿಡ್ತಾಬತ್ತಾ ಇದ್ದವು?ಬರೆವವ್ ಬರೆತ್ತವಿಲ್ಲೆ.ಒಂದೆರಡು ಬ್ಲೊಗ್ ಓದುಲೆ ಇಂಟರೆಸ್ಟ ಇದ್ದದ್ದು.ಇನ್ನು ಅದೂ ಇಲ್ಲೆ.thank you computer open ಮಾಡಿ ಓದುವ ಒಂದು ಕೆಲಸ ಮತ್ತು ಸಮಯ ಉಳುಶಿದ್ದಕ್ಕೆ....!!!
all d best
ಗಾಡಿ ಮತ್ತು ಬಾಡಿ ರಿಪೇರಿ ಆಯ್ತೋ?
-Jogi
ಓಹ್ ಹೀಗೋ ವಿಷ್ಯ..
KUNTINIGE ENU AGILLA.AVARU CHENNAGIDDARE.ACCIDENT AGILLA.JOGIGE KACHCHABEKU.HE IS FINE.
KALPANA BHAT
ಕಲ್ಪನಾ
ಕುಂಟಿನಿಗೆ ಆಕ್ಸಿಡೆಂಟ್ ಆಯ್ತು ಅಂತ ನಾನೆಲ್ರೀ ಬರೆದೆ. ಎಲ್ಲಾ ನಿಮ್ಮ ಕಲ್ಪನೆ.
ಅಂದ ಹಾಗೆ ಕಚ್ಚೋದಕ್ಕೆ ಯಾವಾಗ ಬರ್ತೀರಿ?
-jogi
ಕುಂಟಿನಿಯವರೆ, ಜೋಗಿಯವರಿಗೊಂದು ಟಿಟಿ ಇಂಜೆಕ್ಶನ್ ಹಾಕಿಸ್ಬಿಡಿ. ಯಾಕೆ ಸುಮ್ನೆ...
ಸರ್..ಏನು ರಿಪೇರಿಯೋ..ನಂಗೆ ಫೋನ್ ಮಾಡ್ತಿನಿ ಅಂದು ಫೋನೇ ಮಾಡಿಲ್ಲ.ಟೂಊಊಊಊ!
-ಚಿತ್ರಾ
ಬೇಗ ರಿಪೇರಿ ಕೆಲಸ ಮುಗಿಸಿ....ಬೇಕಾದ್ರೆ ನಾವೆಲ್ಲ ಕೈ ಜೋಡಿಸ್ತೀವಿ. ಏನಾಗಬೇಕು ಹೇಳಿ? ಲೇಟ್ ಮಾಡಿದ್ರೆ ಜೋಕೆ....ಸರ್...
-ಚಿತ್ರಾ
ಶಿರಾಡಿ ಘಾಟಿ ರಸ್ತೆ ರಿಪೇರಿ ಥರ ಆಯ್ತಲ್ಲ ಮಾರಾಯ. ದೊಡ್ಡ ಲಾರಿಗಳನ್ನೆಲ್ಲ ಓಡಾಡೋಕೆ ಬಿಡಬೇಡ. ಕಾರು ಬಸ್ಸುಗಳಿಗೆ ಮಾತ್ರ ಅವಕಾಶ ಕೊಡು. ಓವರ್ ಲೋಡ್ ಮಾಡಿಕೊಂಡ್ರೆ ಹೀಗೇ ಆಗೋದು.
-ಜೋಗಿ
Post a Comment