ವಿರಹ
ಎಂದರೆ
ನಕ್ಷತ್ರಗಳಿಲ್ಲದ
ರಾತ್ರಿ
ವಿರಹ
ಎಂದರೆ
ಅರುಣೋದಯಕ್ಕೆ
ಅಸ್ತಮಾನ
ವಿರಹ
ಎಂದರೆ
ಗಾಳಿ
ಬೀಸದ
ಮುಗಿಲು
ವಿರಹ
ಎಂದರೆ
ಭೂಮಿಗೆ ಚಲನೆಯ ಮರೆವು
ವಿರಹ
ಎಂದರೆ
ಪಕಳೆಗಳುರುಳಿದ
ಗುಲಾಬಿ
ವಿರಹ ಎಂದರೆ
ಹಾರಲಾರದ
ದುಂಬಿ
ವಿರಹ
ಎಂದರೆ
ಕಂತಿದ ಭೂಮಿ
ಚಿಮ್ಮಿದ
ಬಾನು
ವಿರಹ
ಎಂದರೆ
ಕನಸೇ
ಇಲ್ಲದ
ನಿದ್ದೆ
ಅವಳು ಇನ್ಯಾರಿಗೋ ನೆನಪು
ಸಂಭ್ರಮ..
1 comments:
ನಿಜ. ವಿರಹ ವೆಂದರೆ ಒಂದು ರೀತಿಯ ನಿಂತಲ್ಲಿ ನಿಲ್ಲಲಾಗದ ಅನುಭವ!
ಪದ್ಯ ಸೊಗಸಾಗಿದೆ.
Post a Comment