20081026

ಅಶಾಶ್ವತ



ಪ್ರೀತಿಗಿಂತಲೂ
ವಿರಹ
ಆಪ್ತ
ಕಂಸನಿಗೆ 
ಕೃಷ್ಣನ ಕನಸಿನಂತೆ
ರಾಧೆಗೂ ಗಂಡನಿದ್ದ
ಕೃಷ್ಣನಲ್ಲಿ
ಅವಳಿಗೆ
ವಿರಹದ ಭಯವಿತ್ತಂತೆ
ಪ್ರೀತಿಸುವುದು
ಆಕಸ್ಮಿಕ
ವಿರಹ ಮಾತ್ರಾ ಅನಿವಾರ್ಯ
ಒಂದೇ ಕೊಡೆ
ಒಂದೇ ಬಿಸಿಲು
ನೆರಳು ಮಾತ್ರಾ ಎರಡು
ಒಂದೇ ಮನಸ್ಸು
ಒಂದು ಕ್ಷಣ
ಎರಡಾದಾಗ ಅದು ಜಗದ ನಿಯಮ
ದ್ವೈತ ಎಂದರೆ ಅವನೂ ಅವಳೂ
ಅದ್ವೈತ ಎಂದರೆ ಅಖಂಡ ಪ್ರೇಮ

2 comments:

shivu K said...

ಆಶಾಶ್ವತ ಸಾರ್,
ಒಂದೇ ಬಿಸಿಲು,
ಒಂದೇ ಕೊಡೆ,
ನೆರಳು ಮಾತ್ರ ಎರಡು.

ಪದ್ಯದ ಸಾಲುಗಳು ಚೆನ್ನಾಗಿವೆ. ಪದ್ಯವೂ ಚೆನ್ನಾಗಿದೆ. ಹೀಗೆ ಬರೆಯುತ್ತಿರಿ....

ರಾಧಾಕೃಷ್ಣ ಆನೆಗುಂಡಿ. said...

ಸಖತ್ ಮಾರಾಯರೇ.....

Photo ಎಲ್ಲಿಂದ ಸಾರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್