ಏಳು ಮಲ್ಲಿಗೆ ತೂಕದ
ರಾಜಕುವರಿ..
ಏಳು ಕೋಟೆಯಾಚೆ
ಏಳು ನದಿಗಳಾಚೆ
ಏಳು ಬೆಟ್ಟಗಳಾಚೆ..
ಅವನಿಗೆ ಮಾತ್ರಾ ಗೊತ್ತಿದೆ
ಅವಳು ಏಳು ಮಲ್ಲಿಗೆಯ ಘಮ
ಅವಳು ಏಳು ಬೆಟ್ಟಗಳ ಪ್ರೀತಿ
ಅವಳು ಏಳು ನದಿಗಳ ಆತುರ
ಅವಳು ಏಳು ಕೋಟೆಗಳ ಬೆಚ್ಚನೆ
ನದಿಗಳು ಮಳೆಯನ್ನು ನುಂಗುವವು
ಬೆಟ್ಟಗಳು ಗಾಳಿಯನ್ನು ತಡೆಯುವವು
ಕೋಟೆಗಳು ಛಳಿಯನ್ನು ಕದಿಯುವವು
ಅವನು ಎಂದು ಬರುವನೋ
ಕಾಯಬೇಕು
ಅವಳು ಮತ್ತು
ನದಿ ಬೆಟ್ಟ ಕೋಟೆ ಎಲ್ಲವೂ
3 comments:
ಅದ್ಭುತವಾಗಿದೆ ಸಾರ್ ಸಾಲುಗಳು, ಅವು ಸೃಷ್ಟಿಸಿದ ಮಡಿಕೆಯ ಆಕೃತಿ. ನಾಲ್ಕು ಹನಿಗಳನ್ನು ಇನ್ನು ಮುಂದೆ ಇಂತಹ ಕವನದ ಮಡಿಕೆಗಳಲ್ಲಿ ಹಿಡಿದಿಡಿ. ಇದೇ ಶೈಲಿ, ಆಕಾರದಲ್ಲಿ ಒಂದಷ್ಟು ಬರೆದರೆ ಅದರದ್ದೊಂದು ಪುಸ್ತಕ ಮಾಡಬಹುದು.
ಕೋಟೆಯ ಒಳಹೊಕ್ಕು
ಏಳು ಮಲ್ಲಿಗೆ ತೂಕದ ರಾಜಕುವರಿ
ಎಲ್ಲಿಹಳೋ ಎಂದು ನೋಡುವ ಆಸೆ
ಗಾಳಿ, ಮಳೆ ತಡೆದರೂ
ಆಸೆ ಎಂಬ ಭೂಕಂಪ ತಡೆಯಲು ಸಾಧ್ಯ ಇಲ್ಲವಲ್ಲ!
'ಅವಳು ಏಳು ನದಿಗಳ ಆತುರ'
hmmhh.. I wonder and envy ur imagination
Post a Comment