ಕತೆ ಕಾದಂಬರಿ ಸಿನಿಮಾ ಧಾರಾವಾಹಿ....
ಅದೆಲ್ಲದಕ್ಕಿಂತಲೂ ಮೊದಲಾಗಿ ತನ್ನ ನವಿರಾದ ಲೇಖನಗಳ ಮೂಲಕ...
ಆತ ಒಮ್ಮೆ ಹೇಳಿ ನಿಂತಾಗ, ಅರೆರೆ ಇದು ನನಗೂ ಹೊಳೆಯಬಹುದಿತ್ತಲ್ಲಾ ಆದರೆ ಹೊಳೆಯಲೇ ಇಲ್ಲವಲ್ಲಾ ಎಂಬ ಹಾಗೇ ಮಾಡುವ
ಮಾಡಿದ
ಮಾಡುತ್ತಿರುವ,
ಬರಹಗಳ ಮೂಲಕವೂ ಸಂಬಂಧಗಳ ಮೂಲಕವೂ ಗಾಢ ಎನಿಸುವ,
ಆಪ್ತ ಎನಿಸುವ
ಆತ್ಮೀಯ ಎನಿಸುವ
ಜೋಗಿ
ಇಗೋ ಈಗ ಕವಿ.
ಜೋಗಿ ಅವರ ಚೊಚ್ಚಲ ಕವನ ಸಂಕಲನ ಇಷ್ಟರಲ್ಲೇ ನಿಮ್ಮದೂ ಆಗಲಿದೆ.
ಇದು ನಿಮಗೂ ತಿಳಿದಿರಲಿ ಅಂತ ಈ ಕವರ್‌ಪೇಜ್ ತೋರಿಸುತ್ತಿದ್ದೇನೆ.
ಎಷ್ಟಾದರೂ ಈತ ನಿಮಗೆಲ್ಲರಿಗಿಂತಲೂ ನನಗೆ ಮೊದಲ ಗೆಳೆಯ.
.
4 comments:
ಪ್ರಿಯ ಕುಂಟಿನಿ
ಒಳ್ಳೆಯ ಸುದ್ದಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಜೋಗಿಯವರಿಗೆ ನಮ್ಮ ಶುಭಾಶಯ ಹಾಗೂ ಮುಂಚಿತವಾಗಿ ಅಭಿನಂದನೆಗಳು.
ಕವರಪೇಜ್ ಚೆನ್ನಾಗಿದೆ.
ಪೂರ್ತಿ ನೀಲಿಯಾ? ಯಾಕೋ ಇಷ್ಟವಾಗ್ಲಿಲ್ಲ.
ಪೂತನಿಯ ವಿಷ ಹೀರಿದ ಶ್ರೀಕೃಷ್ಣನ ಬಣ್ಣ! ವಿಷವನ್ನೆಲ್ಲ ಕಂಠದೊಳಗಿಟ್ಟುಕೊಂಡ ಶಿವ!
ವಿಷ ಹಾಗೂ ವಿಷಾದದ ಬಣ್ಣ. ಆದರೂ ಚೆನ್ನ.
ಕಾಫಿಗಾದರೂ ಅದರ ಬಣ್ಣವಿದ್ದಿದ್ದರೆ ಕಡೇಪಕ್ಷ ಅಲ್ಲವ?
ಆದರೂ ಸಮಾಧಾನ, ಎಲ್ಲವನ್ನು ತಬ್ಬುವ ಅಗಾಧ ಆಗಸದ ಬಣ್ಣ, ಚೆನ್ನ.
ಸಲಹೆಯಲ್ಲ, ಅನಿಸಿಕೆ.
-ಹೀಗೊಬ್ಬಳು.
ಹೊ ಹೊ ಹೊ !!! ಜೋಗಪ್ಪ ಅಜ್ಞಾತವಾಸದಿಂದ ಬಂದ್ಮೇಲೆ... ನಮಗೆಲ್ಲ ಕವಿತೆಗಳ ಗೀಳು ಹಚ್ಚಿದರು .... ಖುಷಿ ಆತು ಸುದ್ದಿ ತಿಳ್ದು ..... ಮುಖಪುಟ ವೈನಾಗೈತೆ... :)
-ಅಮರ
ಮುಖ ಪುಟ ಚೆನ್ನಾಗಿದೆ. ಒಳಗಿನ ಪುಟಗಳು ಅದಕ್ಕಿಂತ ಚೆನ್ನಾಗಿರಬಹುದು. ಪುಸ್ತಕದ ನಿರೀಕ್ಷೆಯಲ್ಲಿ...
ನಿಮ್ಮ ನಾಲ್ಕು ಹನಿಗಳು ಸೇರಿ ಪುಸ್ತಕದ ಹಳ್ಳವಾಗಿ ನಮ್ಮ ಕೈಸೇರುವುದು ಯಾವಾಗ? ಆದಷ್ಟು ಬೇಗ ಅದರ ಮುಖಪುಟವನ್ನೂ ಬ್ಲಾಗಿಸುವಂತಾಗಲಿ...
Post a Comment