೧.
ಸಾಗರವನ್ನು ಗೆಲ್ಲಲ್ಲೆಂದು
ಮನುಜ
ದೋಣಿಯನ್ನು ಇಳಿಸಿದ
ಗಾಳಿ ಬಂದು ದೋಣಿಯನ್ನೆತ್ತಿ
ದಡಕ್ಕೆಸೆಯಿತು।
೨.
ಕಡಲ ಮೇಲೊಂದು
ಕಲ್ಲು ಕೂಡಾ ನಿಲ್ಲಿಸಲಾಗದ
ದೊರೆ
ದ್ವೀಪವನ್ನು
ಪಡೆಯಲು
ದಂಡೆತ್ತಿ ಹೋಗುವುದು
ಎಂಥಾ ಆಭಾಸ।
೩.
ಭೂಮಿಯನ್ನು
ಕಬಳಿಸಿದ ಮನುಷ್ಯನಿಗೆ
ಸಮುದ್ರದ ಅಗಾಧತೆ
ನಾಚಿಕೆ ಮೂಡಿಸುವುದು.
೪।
ಕೋಟಿಕೋಟಿ ತೆರೆಗಳ ಮೇಲೆ
ನೀನು ಒಂದಕ್ಷರವನ್ನೂ
ಬರೆಯಲಾರೆ.
0 comments:
Post a Comment