20080511

ನಾಲ್ಕು ಸಾಲು-೪೨೧.
ಸಾಗರವನ್ನು ಗೆಲ್ಲಲ್ಲೆಂದು
ಮನುಜ
ದೋಣಿಯನ್ನು ಇಳಿಸಿದ
ಗಾಳಿ ಬಂದು ದೋಣಿಯನ್ನೆತ್ತಿ
ದಡಕ್ಕೆಸೆಯಿತು।

೨.
ಕಡಲ ಮೇಲೊಂದು
ಕಲ್ಲು ಕೂಡಾ ನಿಲ್ಲಿಸಲಾಗದ
ದೊರೆ
ದ್ವೀಪವನ್ನು
ಪಡೆಯಲು
ದಂಡೆತ್ತಿ ಹೋಗುವುದು
ಎಂಥಾ ಆಭಾಸ।

೩.
ಭೂಮಿಯನ್ನು
ಕಬಳಿಸಿದ ಮನುಷ್ಯನಿಗೆ
ಸಮುದ್ರದ ಅಗಾಧತೆ
ನಾಚಿಕೆ ಮೂಡಿಸುವುದು.
೪।

ಕೋಟಿಕೋಟಿ ತೆರೆಗಳ ಮೇಲೆ
ನೀನು ಒಂದಕ್ಷರವನ್ನೂ
ಬರೆಯಲಾರೆ.


20080508

ನಾಲ್ಕು ಸಾಲು


೧.
ಆಕಾಶದಲ್ಲಿ ತಾರೆಗಳ

ಮುಟ್ಟಿ ನಿಂತವನು

ಭೂಮಿಯನ್ನು ನೋಡಿ ನಕ್ಕ.

ಭೂಮಿ ಕೂಡಾ ನಕ್ಕಿತು

"ಕೊನೆಗೂ ನೀನು ನನ್ನಲ್ಲೇ....."

॥೨।

ಮೊದಲ ಪ್ರೀತಿಯ

ಸ್ಪರ್ಶದ ಬಿರುಸು

ಎದೆಯ ಅಗ್ಗಿಷ್ಟಿಕೆಯಲ್ಲಿ ಸದಾ ಕೆಂಡವಾಗಿರುವುದು


೩।

ಗಾಳಿಗೆ

ತಲೆದೂಗುವ

ಮರಗಿಡಗಳನ್ನು

ಬೆಟ್ಟಗುಡ್ಡಗಳು ಗೇಲಿಮಾಡಿದವು


ನೀರಿಳಿದ ಮೇಲೆ

ಕಂಡ ದಂಡೆಯಲ್ಲಿ

ಮಿಲನ ಮತ್ತು ವಿರಹಗಳು

ಹರಳುಗಟ್ಟಿರುವುದು