ನಾಲ್ಕು ಸಾಲು-೩೯


೧.
ನಿತ್ಯ ಮುಂಜಾನೆ
ಹಕ್ಕಿಯ ಕಲರವದಲ್ಲಿ
ನಿನ್ನ
ಸಂತೋಷಕ್ಕಿಂತ
ಅದರ
ಪಾಡಿದೆ.
೨.
ಹಕ್ಕಿ
ಬಿಟ್ಟುಹೋದ
ಗೂಡಿನಲ್ಲಿ
ಒಂದು ಚಿಟಿಕೆ ಪ್ರೀತಿ
ಸಿಕ್ಕರೆ ನೀನು
ಸುಖಿ ಸಂಸಾರಿ.
೩.
ಹಕ್ಕಿಯ
ಕಾವಲು
ಮತ್ತು
ಮರಿಗಳ ಕಾತರಗಳ
ನಡುವೆ
ಕಾಲ ದೇಶಗಳೆಲ್ಲಾ
ನಿಂತು ಚಲಿಸುವುದು.
೪.
ಹೆತ್ತು ಸಲಹುವುದಕ್ಕೆ
ಮಾತ್ರಾ
ಮನೆ ಕಟ್ಟುವ
ಹಕ್ಕಿ
ಮನುಷ್ಯನ
ವಾಸ್ತವ್ಯವನ್ನು ಅಣಕಿಸುವುದು.

Comments

Keshav.Kulkarni said…
ಕುಂಟಿನಿ,
೧ ಮತ್ತು ೪ ಅಧ್ಬುತ! ನನ್ನ ಬ್ಲಾಗಿನಲ್ಲಿ ಸೇರಿಸಿಕೊಂಡಿದ್ದೇನೆ. ನಿಮ್ಮ ಅಭ್ಯಂತರವಿಲ್ಲವಷ್ಟೇ?
ಕೇಶವ (www.kannada-nudi.blogspot.com)
bhadra said…
ಗುಬ್ಬಚ್ಚಿ ಕಾಣುವುದೇ ಬಹಳ ಅಪರೂಪವಾಗಿದೆ
ಇಂತಹ ಸಂದರ್ಭದಲ್ಲಿ ಬಹಳ ಸುಂದರವಾದ ಚುಟುಕಗಳೊಂದಿಗೆ
ಗುಬ್ಬಚ್ಚಿಗಳ ಚಿತ್ರಗಳನ್ನು ಇರಿಸಿರುವುದು, ಕಣ್ಮನ ಸೆಳೆಯುವಂತಿದೆ

ನಿಮ್ಮ ಪರವಾನಗಿ ಇಲ್ಲದೆಯೇ ಗುಬ್ಬಚ್ಚಿಗಳ ಚಿತ್ರವನ್ನು ಇಳಿಸಿ ಉಳಿಸಿಕೊಂಡಿರುವೆ :)
ನಿಮ್ಮ ಚುಟುಕಗಳು ತುಂಬಾ ಚೆನ್ನಾಗಿವೆ...

ಹೆಚ್ಚಿಗೆ ಹೇಳೋದಕ್ಕಿಂತ, ಮುಚ್ಚಿಡೋದೇ ಚೆಂದ.

ಈ ಕವನಗಳಿಗೆ - ನನ್ನ ಬ್ಲಾಗಿನಿಂದ ಒಂದು ಲಿಂಕ್ ಕೊಟ್ಟೀದ್ದೀನಿ. ನಿಮ್ಮ ಅಭ್ಯಂತರ ಇದ್ದರೆ ತಿಳಿಸಿ.

ಸಂತೋಷ್
http://kaaduharate.blogspot.com/

Popular posts from this blog

ಒಳಗೆ ಕೆಲಸ ನಡೆಯುತ್ತಿದೆ

ನೇಪಾಳ ಕಲಿಸುವ ಪಾಠಗಳು